Friday, May 23, 2008

ಮನ - ಮಳೆ

ಮಳೆಯ ಜಿಟಿಪಿಟಿ ಸದ್ದು
ಮನದ ಮೂಲೆಯೊಳೆಲ್ಲೋ,
ಮೋಡ ಮುಸುಕಿಹುದಲ್ಲ
ಮನದ ಹೊರಗು ಒಳಗೂ.
ಭಾವದಲೆಗಳ ಏಳು ಬೀಲಿನ ಆಟ
ನಡೆದಿಹುದು ಹೃದಯದಾಳದೊಳೆಲ್ಲೋ,
ಗುಡುಗು ಮಿಂಚಿನ ಜೋಡಿಯಾಟದ ಮೋಡಿ
ತನುವ ತಣಿಸಿಹುದಲ್ಲ ಮನವ ಮಿಡಿಸಿ.
...Shru.Bha

1 comment:

ಶರಶ್ಚಂದ್ರ ಕಲ್ಮನೆ said...

ಕವನ ಹಾಗು ಫೊಟೊ ಶಾಪ್ ತಂತ್ರಾಂಶಗಳು ಚನ್ನಾಗಿವೆ. ಧನ್ಯವಾದಗಳು.