Monday, July 5, 2010

maLe

ಬಹಳ ದಿನಗಳ ಮೇಲೆ ಬ್ಲಾಗ್ ಬರಯಕ್ಕೆ ಕುತಿದ್ದಿ. ಹೊರಗಡೆ ಮಳೆ ಬತ್ತಾ ಇದ್ದು. ಆದ್ರೆ ಬೆಂಗಳೂರಿನ ಮಳೆ ಎಷ್ಟು ಹೊತ್ತು ಬತ್ತು? ಇನ್ನೊಂದು ೫ ನಿಮಿಷಕ್ಕೆ ಮಳೆ ನಿಂತರೆ ಮತ್ತೆ ಇಡೀ ದಿನ ಬತ್ತು ಅನ್ನಕ್ಕೆ ಬತಲೇ.!! ಊರಲ್ಲಿ ಆದ್ರೆ. . ಅಪ್ಪ ಬೆಳಿಗ್ಗೆ ಫೋನ್ ಮಾಡ್ದಾಗ ಹೇಳ್ತಾ ಇದ್ದಿದ್ನ ಮಳೆ ಹೊಡಿತ ಇದ್ದು ಎಷ್ಟ್ ದಿನ ಬತ್ತೇನ ಅಂತ!!!
ನಂಗೆ ಮಳೆಯಲ್ಲಿ ಆಟ ಆಡಿದ್ದು ನೆನಪಿಲ್ಲೆಹಂಗಂತ ಸ್ಕೂಲ್ ನಿಂದ ಬರ್ತಾ ಮಳೆಲಿ ನೆನ್ಕಂಡ್ ಬಂದು ಅಮ್ಮನ ಹತ್ರ ಬೈಸಿಕಳ್ತಾ ಇದ್ದಿದ್ದು. :-) ಮರ್ಯಲ್ಲೇ. ತುಂಗಾ ನದಿ ತುಂಬಿ ಹರಿತಾ ಇದ್ದು ಅಂತ ಅಪ್ಪನ ಜೊತೆ ಹೋಗಿ ರಾಮಮಂಟಪದ ತುದಿ ಮಾತ್ರ ದೂರದಿಂದ ನೋಡಿದ್ದು .. ಹಿಂಗೆ ಹಲವು ಹತ್ತು ನೆನಪು. ಭಾನು ಹೇಳ್ತಾ ಇದ್ದಿದ್ನ, ಗುಡ್ಡಕ್ಕೆ ಹೋಗಿ ಮಳೆ ಹುಳದ ಹಿಂದೆ ಓದ್ತಾ ಇದ್ದಿದ್ದು, ಹಂಡೆ ತುಂಬಾ ಇರ ಬಿಸಿ ನೀರು ಖಾಲಿ ಅಪವರೆಗೆ ಸ್ನಾನ ಮಾಡಿ ಅಮ್ಮನ ಹತ್ರ ಬೈಸಿಕೊಳ್ತಾ ಇದ್ದದ್ದು. ಈಗ ಮಳೆ ಬಂದ್ರೆ ಹುಡುಗರೆಲ್ಲಾ ಮನೆಯ ಒಳಗೆ.:-( ನಾವ್ ತಾನೇ ಎಷ್ಟರ ಮಟ್ಟಿಗೆ ಹೊರಗೆ ಹೋಗಿ ನೆನಿತು??
ಮಳೆಯಗಾಲದ ಮಳೆಯಲ್ಲಿ
ಆಟವಾಡಿದ ನೆನಪು
ಗೇರುಬೀಜವ ಸುಟ್ಟು
ತಿಂದ ಅ ರುಚಿಯ ...
ಗುಡ್ಡದ ತುದಿಗೇರಿ
ಜಾರಿಬಿದ್ದ ಪೆಟ್ಟಾ ...
ಕೆಸರಿನಲ್ಲಿ ಅಡಿ
ಬೈಸಿಕೊಂಡ ಸಮಯ
ಮಳೆಯಗಾಲದಲ್ಲಿ ಅಡಿ
ಮರೆಯುವುದೆಲ್ಲಿಯಾದರು ಉಂಟಾ???
.................... /////////...................

3 comments:

Bhanu said...

hmm...i love the rainy days...

shridhar said...

ಸವಿ ಸವಿ ನೆನಪು .. ಅಳಿಯದ ನೆನಪು ..
ಈ ಮಳೆಗಾಲನೆ ಹಾಂಗೆ .. ಎಲ್ಲ ನೆನೆಪುಗಳನ್ನು ಕೆದಕಿ ತೆಗೆತು ..
ಇವತ್ತು ನಮ್ಮ ಎರಿಯಾದಲ್ಲಿ ಮಳೆ ಆತು .. ಆಂದ್ರೆ ನಂಗೆ ಗೊತ್ತಗಿದ್ದು
ಊಟಕ್ಕೆ ಹೇಳಿ ಹೊರ್ಗೆ ಬಂದಾಗ್ಲೆಯಾ ..
ಎ.ಸಿ ರೂಮನಲ್ಲಿ ಕಂಪ್ಯುಟರ್ ಎದರು ಕುಂತು ಇದ್ರೆ
ಸುತ್ಲು ಎಂತಾ ಆಗ್ತ ಇದ್ದು ಹೇಳಿ ಸಹ ಗೊತ್ತಗ್ತಿಲ್ಲೆ ..
ಕಾಲದ ಮಹಿಮೆ ಹೇಳಿ ಹೇಳದೆಯಾ .. ಅಲ್ದಾ ...

ಹಲಸಿನ ಬೇಳೆ .. ಗೇರು ಬೀಜ .. ಬಿಸಿ ಬಿಸಿ ಹಪ್ಪಳ ಸಂಡಿಗೆ ... ಎಲ್ಲ ನೆನಪಾತು ..
ಬರಹ ಚೆನ್ನಾಗಿದ್ದು ...

ಮೃತ್ಯುಂಜಯ ಹೊಸಮನೆ said...

ಬರಹ ಚೆನ್ನಾಗಿದ್ದು. ಕಾಗುಣಿತದ ತಪ್ಪುಗಳ ಬಗ್ಗೆ ಗಮನವಿರಲಿ.ಬರೀತಿರು.