Friday, July 31, 2009

ಬಾಲ್ಯದ ನೆನಪುಗಳು ೧

ನಂಗೆ ಅಪ್ಪ ಸೈಕಲ್ ಕೊಡ್ಸಿದ್ದು ೭ ನೆ ಕ್ಲಾಸ್ ಗೆ ಬಂದ ಮೇಲೆ. . ಅವಾಗ ನಂಗ ಡೆಲ್ಲಿಯಲ್ಲಿ ಇದ್ದಿದ್ದಾಗಿತ್ತು.. ಈಗಲೂ ಆ ಸೈಕಲ್ ಬೆಂಗಳೂರಲ್ಲಿರ ನನ್ನ ದೊಡ್ಡಪ್ಪನ ಮನೆಯಲಿದ್ದು. ಅಪ್ಪ ಸೈಕಲ್ ಕೊಡ್ಸಕಿಂತ ಮುಂಚೆ ನನ್ನ ಹತ್ರ ೧ ಕಂಡೀಷನ್ ಹಾಕಿದಿದ್ನ. .


ಯೆಂತಾಪ ಅಂದ್ರೆ ನೀ ಯಾವತ್ತು ಸೈಕಲ್ ಹೊಡಿಯದು ಕಲಿತ್ಯ ಅವತ್ತು ನಿಂಗೆ ಸೈಕಲ್ ಅಂಥ...


ಆವಾಗ ನಾ ಇನ್ನು ೪ ನೆ ಕ್ಲಾಸ್. .!


ಸರಿ ಅಪ್ಪ ಹಿಂಗೆ ಹೇಳಿದ ಮೇಲೆ ನಾ ಕಲಿಯ ತನಕ ಸೈಕಲ್ ಕೊಡ್ಸದಿಲ್ಲೇ ಅಂತ ನಂಗೆ ಪಕ್ಕ ಆತು. ಆವಾಗ ನಂಗ ತೀರ್ಥಹಳ್ಳಿ ಯಲ್ಲಿ ಇದ್ದಿದ್ಯ.. ನನ್ನ ಗೆಳೆಯರ ಗುಂಪಲ್ಲಿ ಸೈಕಲ್ ಇದ್ದಿದ್ದು ಆಕಾಶನ ಹತ್ರ ಮಾತ್ರ . . ೧ ಭಾನುವಾರ ಅವ್ನ ಹತ್ರ ಹೋಗಿ ಅಪ್ಪ ಹಿಂಗೆ ಹೇಳ್ತಾ ಇದ್ನ ನೀ ಈಗ ನಂಗೆ ಸೈಕಲ್ ಹೊಡಿಯದು ಹೇಳಿ ಕೊಟ್ರೆ ಹೊಸ ಸೈಕಲ್ ನಿಂಗು ಹೊಡಿಯಕ್ಕೆ ಕೊಡ್ತಿ ಅಂಥ ಆಸೆ ತೋರ್ಸಿ ಅವನನ್ನ ಒಪ್ಪಿಸಿದಿ. ಆದ್ರೆ ಅವ್ನು ಒಪ್ಪಿದ ಮೇಲು ೧ ಸಮಸ್ಯೆ ಕಾಡಕ್ಕೆ ಶುರುವಾತು. ಆಕಾಶನು ೪ ನೆ ಕ್ಲಾಸ್ ನನ್ನ ಹಂಗೆ ಸಣ್ಣಕಿದ್ದಿದ್ನ. ಈಗ ಸೈಕಲ್ ಕಲಿಸದಾರೆ ನಂಗೆ ಬ್ಯಾಲೆನ್ಸ್ ಸಿಗಲ್ಲಿವರೆಗಾದ್ರು ಸೈಕಲ್ ಹಿಡ್ಕಲ್ಲೇ ಬೇಕಾಗಿತ್ತು..ಅದು ಅವನಿಂದ ಅಗ್ತಿರ್ಲೆ. . ಈಗ ಎಂತ ಮಾಡದಪ ಅಂತ ಸುಮಾರು ಹೊತ್ತು ಸುಮ್ನೆ ಕೂತಿದಿದ್ಯ. . ಆಕಾಶನ ಅಪ್ಪಂಗೆ ಯಾವತ್ತು ೧ ನಿಮಿಷ ಕೂಡ ಸುಮ್ನೆ ಕೂರದೆ ಇರವ್ರು ಇವತ್ತು ಇಷ್ಟು ತಣ್ಣಗೆ ಕೂತಿರದನ್ನ ನೋಡಿ ಎಂತ ಆತ್ರ ಅಂತ ಕೇಳ್ದ? ಹ ಹಾ ನಂಗಕ್ಕೆ ಬೇಕಾಗಿದ್ದು ಅದೇ ಆಗಿತ್ತು..ಈಗ ನಂಗ ಆಗೇ ಹೋಗಿ ಸೈಕಲ್ ಹೊಡಿಯದು ಹೇಳ್ಕೊಡು ಅಂದಿದ್ರೆ ಇಬ್ಬರು ಬೈಸಿಕಳ್ತಿದ್ಯ. ಇಗಾ ಅವರಾಗೆ ಕೇಳಿದ ಮೇಲೆ . . ಸೋ. ಈ ರೀತಿಯಲ್ಲಿ ಅವ್ರ ಅಪ್ಪ ನಂಗೆ ಸೈಕಲ್ ಕಲ್ಸದಕ್ಕೆ ಒಪ್ಪಿದ.


ಆಮೇಲೆ ೨ ತಾಸಲ್ಲಿ ನಾನು ಸೈಕಲ್ ಹೊಡಿಯದನ್ನ ಕಲ್ತೆ ಬಿಟಿ..:-) ಸಂಜೆ ಅಷ್ಟರಲ್ಲಿ ಅಪ್ಪನ ಮುಂದೆ ಸೈಕಲ್ ಹೊಡೆದು ತೋರ್ಸಿದ್ದು ಅತು....


ಸೈಕಲ್ ಬಂದಿದ್ದು ಮಾತ್ರ ೭ ನೆ ಕ್ಲಾಸ್ಗೆ.. ಅವಾಗ ಬೇಜಾರಗಿತ್ತೆನ ಅದ್ರ ನೆನಪು ಈಗ ಇಲ್ಲೇ ( ಆದ್ರೆ ಆಕಾಶಂಗೆ ಬೇಜಾರ್ ಆಗಿದ್ದು ಹೌದು, ಪಾಪ ಅವ್ನಿಗೆ ಕೊನೆಗೂ ನನ್ನ ಸೈಕಲ್ ಹೊಡಿಯಕ್ಕೆ ಆಗಲೇ ) . ..ಈಗ ನೆನಪಾದಾಗ ಹಾಗೆ ೧ ಮುಗುಳ್ನಗೆ ತೇಲಿ ಹೋಗ್ತು. ಕಲಿಯುವಾಗಿನ ಆ ಹುಮ್ಮಸ್ಸು ಮಜಾ ಮಾತ್ರ ನೆನಪಿನಲ್ಲಿ ಉಳದ್ದು

Shrubhanu

7 comments:

Adarsha said...

ಚೆನ್ನಾಗಿದ್ದು.. ನಂಗೆ ನನ್ನ ಸೈಕಲ್ ಕತೆ ನೆನಪಾತು.. ನಾನು ಸೈಕಲ್ ಕಲಿತದ್ದು ೪ನೇ ಕ್ಲಾಸಿನಲ್ಲಿ, ಆದ್ರೆ ಅಜ್ಜ ಸೈಕಲ್ ಕೊಡ್ಸಕ್ಕೆ ಒಪ್ಪಿದ್ದು ೮ನೇ ಕ್ಲಾಸಿಗೆ!! ಆದರು ನನ್ನ ಬಹಳಷ್ಟು ಸ್ನೇಹಿತರ ಗುಂಪಿಗಿಂತ ನನ್ನ ಸೈಕಲ್ ಚೆನ್ನಾಗಿತ್ತು, ಹಾಗಾಗಿ ಬೇಜಾರು ಮಂಗಮಾಯ ಆಗಿತ್ತು..

Hema said...

ನಿನ್ನ ಸೈಕಲ್ ಸವಾರಿ ಚೆನ್ನಾಗಿದ್ದು.. ನಂಗು ನನ್ನ ಸೈಕಲ್ ನೆನಪಾತು..ಆನುನು ಸೈಕಲ್ ಹೊದ್ದಿದ್ದು ೭ ಕ್ಲಾಸ್ನಲ್ಲಿನೇ!! ಹಠ ಮಾಡಿ ಸೈಕಲ್ ತೆಗಿಷ್ಕ್ಯನ್ದಿದ್ದು,ಅಕ್ಕ ಪಕ್ಕದ ಮನೆಯಲಿದ್ದ ನನ್ನ classmates ಎಲ್ಲ ಸೇರಿ ಸೈಕಲ್ಗಳ ಸವಾರಿ ಹೊಂಟಿದ್ದು,double ride ಮಾಡಕೆ ಬರ್ದೇ ಶೀದಿನ (ಶ್ರೀದೇವಿ, ನನ್ನ ೨ ಕ್ಲಾಸಿಂದ friend) ಮೋರಿಗೆ ಕೆದಗಿದ್ದು,ಎಲ್ಲಾ ಕಣ್ಮುಂದೆ ಬಂದು ಮುಗುಳ್ನಗಿಸಿ ಹೋತು ...

ಮೂರ್ತಿ ಹೊಸಬಾಳೆ. said...

ಹಳೆಯ ನೆನಪುಗಳೇ ಹಂಗೆ ಎಂತ ಮನಸ್ತಿತಿಯಲ್ಲಿದ್ರೂ ನಮಗೇ ಗೊತ್ತಿಲ್ದೆ ನಮ್ಮನ್ನ ಒಂದ್ ಸಲ ಮುಗುಳ್ನಗ್ಸಿ ಬಿಡ್ತು.
ಅಂದ ಹಾಗೆ ಆಕಾಶ ಅಂದ್ರೆ ದಿಗಂತನ ಅಣ್ನನ?
ನಿನ್ನ ಬ್ಲೊಗ್ ಗೆ ಇದೇ ಮೊದಲು ಬತ್ತಾ ಇಪ್ದು ನಾನು ಅದಕ್ಕೆ ಪರಿಚಯಕ್ಕಾಗಿ ಕೇಳಿದಿ.

ShruBhanu said...

houdu

mruthyu said...

ಒಟ್ಟಲ್ಲಿ ವಿಷ್ಯ ಏನಪಾ ಅಂದ್ರೆ ನಿನ್ನಪ್ಪ ಕೊಟ್ ಮಾತು ನಡಸ್ಲೇ ಇಲ್ಲೆ. ಪುಣ್ಯಕ್ಕೆ ಕಡಿಗಾರೂ ಸೈಕಲ್ ಬಂತಲಾ! ಸ್ಕೂಟ್ರು ಕೊಡಸಲ್ಯಾ?
**ಅಕ್ಷರ ಬರೀವಾಗ ಆಗೋ ತಪ್ಪಿನ ಬಗ್ಗೆ ಚೂರು ಗಮನ ಇರ್ಲಿ..

ShruBhanu said...

@mruthyu
Aksharagallanna bekantale tappu barita ille...adu sari maDakkagde haage bittiradu...Adru next time gamana koDti...Anda haage adu complaint maDiruva kate alla...haage nenapu...nange yaavde besara illa....

ಗೌತಮ್ ಹೆಗಡೆ said...

cycle savaari cholo iddo:)