Tuesday, November 24, 2009

ಬಾಲ್ಯದ ನೆನಪುಗಳು ೨

ಅಮ್ಮನ ಉಪ್ಪಿಟ್ಟು

ಮೊನ್ನೆ ೨ -೩ ಮದ್ವೆ ಮನೆಗೆ ಹೋಗಿದ್ದಿ . ಬೆಳಿಗ್ಗೆ ತಿಂಡಿಗೆ ಯಾವಗ್ಲಿನ ಹಾಗೆ ಉಪ್ಪಿಟ್ಟು ಅವಲಕ್ಕಿ ಇತ್ತು. ಆ ಉಪ್ಪಿಟ್ಟು ತಿಂತಾ ಅಮ್ಮ ಮಡ್ತಿದ್ದ ಉಪ್ಪಿಟ್ಟು ಹಾಗೆ ಅದಕ್ಕೆ ಸಂಭಂದಿಸಿದ ೧ ಘಟನೆ ಮತ್ತೆ ನೆನಪಾತು !!!
ಆಗ ನಂಗಿನ್ನು ೭ - ೮ ವರ್ಷ. ಸಕತ್ ಇಷ್ಟ ಪಟ್ಟು ತಿಂತಾ ಇದ್ದ ತಿಂಡಿಲಿ ಉಪ್ಪಿಟ್ಟು ಒಂದಾಗಿತ್ತು. !! ಈಗ ಹಾಸ್ಟೆಲ್ ಜೀವನದ ನಂತರ ಅದಕ್ಕೆ ಹಿಟ್ಟು . . ಕೋಂಕ್ರೀಟ್ ಅಂತೆಲ್ಲಾ ಅಡ್ಡ ಹೆಸ್ರು ಇಟ್ಟ್ರು ಅಮ್ಮ ಮಾಡ್ತಿದ್ದ ಉಪ್ಪಿಟ್ಟು ... ವಾವ್ ಈಗ್ಲು ಬಾಯಲ್ಲಿ ನೀರ್ ತರಿಸ್ತು... ವಿಷ್ಯ ಎಂತಪ ಅಂದ್ರೆ ಆವಾಗ ವಾರದಲ್ಲಿ ೨ - ೩ ಸಲ ತಿಂಡಿಗೆ ಉಪ್ಪಿಟ್ಟು ಆಗ್ಲೇ ಬೇಕಿತ್ತು. ಅದ್ರ ಮೆಲೆ ಮನೆಗೆ ಯಾರಾದ್ರು ನೆಂಟ್ರು ಇಲ್ಲ ಅಪ್ಪನ ಗೆಳೆಯರು ಬತ್ತ ಅಂದ್ರೆ ನಂಗೆ ಇನ್ನೂ ಖುಷಿ, ಗಡಿಬಿಡಿಲಿ ಚನಾಗಿ ಆಪ ತಿಂಡಿ ಅಂದ್ರೆ ಅದೇನಲ?!!
ಅವತ್ತು ಎಂತ ಆತಪ ಅಂದ್ರೆ ನಂಗೆ ಸ್ಕೂಲ್ಗೆ ರಜ ಇತ್ತು.. ಮನೆಲೆ ಎಂತೋ ಆಡ್ತಾ ಇದ್ದಿದ್ದಿ. ಹಿಂದಿನ ದಿನನೆ ಅಮ್ಮ ನಾಳೆ ದೊಡ್ಡಮ್ಮ ಬತ್ತಾ, ಸಂಜೆ ತಿಂಡಿಗೆ ಉಪ್ಪಿಟ್ಟು ಮಾಡಕ್ಕು ಅಂತ ನನ್ನ ಹತ್ರನೆ ರವೆ ತರ್ಸಿದ್ದಿದ್ದ. ನಂಗೆ ೧ ಕಡೆ ಖುಷಿ ಆದ್ರೆ ಇನ್ನೊಂದು ಕಡೆ ಈ ದೊಡ್ಡಮ್ಮಂಗೂ ಉಪ್ಪಿಟ್ಟು ಅಂದ್ರೆ ಇಷ್ಟ ಎಲ್ಲಾ ಇವ್ಳೆ ಖಾಲಿ ಮಾಡಿ ಬಿಟ್ರೆ ಅಂತ ತಲೆಬಿಸಿ...!! ಸರಿ ಅದು ಇದು ಮಾಡ ತನ್ಕ ಸಂಜೆ ಆತು, ಅಮ್ಮ ಅಡ್ಗೆ ಮನೇಲಿ ಉಪ್ಪಿಟ್ಟಿನ ತಯಾರಿ ನಡ್ಸಿದ್ದಿದ್ದ. ಈ ಮದ್ಯ ನನ್ನ ಗೆಳತಿ ಆಡಕ್ಕೆ ಕರದ ಅಂತ ಅವ್ರ ಮನೆಗೆ ಹೋಗಿದ್ದಿದ್ದಿ. ಆಗಿನ ನಂಗ್ಳ ಆಟ ಅಂದ್ರೆ ಕಳ್ಳ-ಪೋಲಿಸ್, ಮನೆ ಮನೆನೋ ಇಲ್ಲಾ ಟೀಚರ್ ಟೀಚರ್ ಅಗಿರ್ತಿತ್ತು. ಆಟ ಯಾವ್ದೇ ಆಗಿದ್ರು ಒಂದು ಕೋಲು ಬೇಕೇ ಬೇಕಾಗಿತ್ತು. ಅದಕ್ಕೆ ಅಂತ ನಾನು ನನ್ನ ಮಾಮೂಲಿ ಕೋಲು ತಗಂಡು ಹೊಗಿದ್ದಿದ್ದಿ. ಉಪ್ಪಿಟ್ಟು ರೆಡಿ ಆತು ಅಂತ ಅಮ್ಮ ಕರ್ದಿದ್ದು ಕೇಳಿ ಆಟ ಎಲ್ಲಾ ಬಿಟ್ಟು ಓಡಿ ಬಂದಿ. ನಾನು ಮನೆ ಮುಟ್ಟ ಮೊದ್ಲೆ ದೊಡ್ಡಮ್ಮ ಉಪ್ಪಿಟ್ಟ ಹಾಕ್ಯಂಡು ಅಡ್ಗೆ ಮನೆ ಕಡೆ ಇಂದ ಬತ್ತಾ ಇದ್ದಿದ್ದ. ನಾನು ಉಪ್ಪಿಟ್ಟು ಹಾಕಿಸ್ಕಂಡು ಬರಲೆ ಅಂತ ಅಡ್ಗೆ ಮನೆ ಕಡೆ ಒಡ್ಗಿ. ಆದ್ರೆ ಉಪ್ಪಿಟ್ಟು ಹಾಕಿಸ್ಕಳ ಮುಂಚೆ ಜಗಲಿ ಇಂದ ದುಡುಮ್ ಶಬ್ದ ಕೇಳಿ ಎಲ್ಲಾ ಓಡಿ ಹೋಗಿ ನೋಡಿರೆ ದೊಡ್ಡಮ್ಮ ಆರಾಮ್ ಕುರ್ಚಿ ಮದ್ಯ ದ ಜಾಗದಲ್ಲಿ ಬಿದಿದ, ಉಪ್ಪಿಟ್ಟೆಲ್ಲಾ ಅವ್ಳ ಮೇಲೆ!!
ಆಗಿದ್ದು ಮತ್ತೇನಲ್ಲ, ನನ್ನ ಮಾಮೂಲಿ ಕೋಲು ಆರಾಮ್ ಕುರ್ಚಿ ಯ ಬಟ್ಟೆಗೆ ಹಾಕ ಕೋಲು ಒಂದೆ ಆಗಿತ್ತು. ಈಗ್ಲು ಉಪ್ಪಿಟ್ಟು ತಿನ್ನಕಿದ್ರೆಲ್ಲಾ ಇದು ನೆನಪಾಗ್ತು .
(ಹೇ ಮಾ ಮುಂದಿನ ಸಲ ಊರಿಗೆ ಬಂದಾಗ ಉಪ್ಪಿಟ್ಟು ಮಾಡೆ, . . . .)

Friday, July 31, 2009

ಬಾಲ್ಯದ ನೆನಪುಗಳು ೧

ನಂಗೆ ಅಪ್ಪ ಸೈಕಲ್ ಕೊಡ್ಸಿದ್ದು ೭ ನೆ ಕ್ಲಾಸ್ ಗೆ ಬಂದ ಮೇಲೆ. . ಅವಾಗ ನಂಗ ಡೆಲ್ಲಿಯಲ್ಲಿ ಇದ್ದಿದ್ದಾಗಿತ್ತು.. ಈಗಲೂ ಆ ಸೈಕಲ್ ಬೆಂಗಳೂರಲ್ಲಿರ ನನ್ನ ದೊಡ್ಡಪ್ಪನ ಮನೆಯಲಿದ್ದು. ಅಪ್ಪ ಸೈಕಲ್ ಕೊಡ್ಸಕಿಂತ ಮುಂಚೆ ನನ್ನ ಹತ್ರ ೧ ಕಂಡೀಷನ್ ಹಾಕಿದಿದ್ನ. .


ಯೆಂತಾಪ ಅಂದ್ರೆ ನೀ ಯಾವತ್ತು ಸೈಕಲ್ ಹೊಡಿಯದು ಕಲಿತ್ಯ ಅವತ್ತು ನಿಂಗೆ ಸೈಕಲ್ ಅಂಥ...


ಆವಾಗ ನಾ ಇನ್ನು ೪ ನೆ ಕ್ಲಾಸ್. .!


ಸರಿ ಅಪ್ಪ ಹಿಂಗೆ ಹೇಳಿದ ಮೇಲೆ ನಾ ಕಲಿಯ ತನಕ ಸೈಕಲ್ ಕೊಡ್ಸದಿಲ್ಲೇ ಅಂತ ನಂಗೆ ಪಕ್ಕ ಆತು. ಆವಾಗ ನಂಗ ತೀರ್ಥಹಳ್ಳಿ ಯಲ್ಲಿ ಇದ್ದಿದ್ಯ.. ನನ್ನ ಗೆಳೆಯರ ಗುಂಪಲ್ಲಿ ಸೈಕಲ್ ಇದ್ದಿದ್ದು ಆಕಾಶನ ಹತ್ರ ಮಾತ್ರ . . ೧ ಭಾನುವಾರ ಅವ್ನ ಹತ್ರ ಹೋಗಿ ಅಪ್ಪ ಹಿಂಗೆ ಹೇಳ್ತಾ ಇದ್ನ ನೀ ಈಗ ನಂಗೆ ಸೈಕಲ್ ಹೊಡಿಯದು ಹೇಳಿ ಕೊಟ್ರೆ ಹೊಸ ಸೈಕಲ್ ನಿಂಗು ಹೊಡಿಯಕ್ಕೆ ಕೊಡ್ತಿ ಅಂಥ ಆಸೆ ತೋರ್ಸಿ ಅವನನ್ನ ಒಪ್ಪಿಸಿದಿ. ಆದ್ರೆ ಅವ್ನು ಒಪ್ಪಿದ ಮೇಲು ೧ ಸಮಸ್ಯೆ ಕಾಡಕ್ಕೆ ಶುರುವಾತು. ಆಕಾಶನು ೪ ನೆ ಕ್ಲಾಸ್ ನನ್ನ ಹಂಗೆ ಸಣ್ಣಕಿದ್ದಿದ್ನ. ಈಗ ಸೈಕಲ್ ಕಲಿಸದಾರೆ ನಂಗೆ ಬ್ಯಾಲೆನ್ಸ್ ಸಿಗಲ್ಲಿವರೆಗಾದ್ರು ಸೈಕಲ್ ಹಿಡ್ಕಲ್ಲೇ ಬೇಕಾಗಿತ್ತು..ಅದು ಅವನಿಂದ ಅಗ್ತಿರ್ಲೆ. . ಈಗ ಎಂತ ಮಾಡದಪ ಅಂತ ಸುಮಾರು ಹೊತ್ತು ಸುಮ್ನೆ ಕೂತಿದಿದ್ಯ. . ಆಕಾಶನ ಅಪ್ಪಂಗೆ ಯಾವತ್ತು ೧ ನಿಮಿಷ ಕೂಡ ಸುಮ್ನೆ ಕೂರದೆ ಇರವ್ರು ಇವತ್ತು ಇಷ್ಟು ತಣ್ಣಗೆ ಕೂತಿರದನ್ನ ನೋಡಿ ಎಂತ ಆತ್ರ ಅಂತ ಕೇಳ್ದ? ಹ ಹಾ ನಂಗಕ್ಕೆ ಬೇಕಾಗಿದ್ದು ಅದೇ ಆಗಿತ್ತು..ಈಗ ನಂಗ ಆಗೇ ಹೋಗಿ ಸೈಕಲ್ ಹೊಡಿಯದು ಹೇಳ್ಕೊಡು ಅಂದಿದ್ರೆ ಇಬ್ಬರು ಬೈಸಿಕಳ್ತಿದ್ಯ. ಇಗಾ ಅವರಾಗೆ ಕೇಳಿದ ಮೇಲೆ . . ಸೋ. ಈ ರೀತಿಯಲ್ಲಿ ಅವ್ರ ಅಪ್ಪ ನಂಗೆ ಸೈಕಲ್ ಕಲ್ಸದಕ್ಕೆ ಒಪ್ಪಿದ.


ಆಮೇಲೆ ೨ ತಾಸಲ್ಲಿ ನಾನು ಸೈಕಲ್ ಹೊಡಿಯದನ್ನ ಕಲ್ತೆ ಬಿಟಿ..:-) ಸಂಜೆ ಅಷ್ಟರಲ್ಲಿ ಅಪ್ಪನ ಮುಂದೆ ಸೈಕಲ್ ಹೊಡೆದು ತೋರ್ಸಿದ್ದು ಅತು....


ಸೈಕಲ್ ಬಂದಿದ್ದು ಮಾತ್ರ ೭ ನೆ ಕ್ಲಾಸ್ಗೆ.. ಅವಾಗ ಬೇಜಾರಗಿತ್ತೆನ ಅದ್ರ ನೆನಪು ಈಗ ಇಲ್ಲೇ ( ಆದ್ರೆ ಆಕಾಶಂಗೆ ಬೇಜಾರ್ ಆಗಿದ್ದು ಹೌದು, ಪಾಪ ಅವ್ನಿಗೆ ಕೊನೆಗೂ ನನ್ನ ಸೈಕಲ್ ಹೊಡಿಯಕ್ಕೆ ಆಗಲೇ ) . ..ಈಗ ನೆನಪಾದಾಗ ಹಾಗೆ ೧ ಮುಗುಳ್ನಗೆ ತೇಲಿ ಹೋಗ್ತು. ಕಲಿಯುವಾಗಿನ ಆ ಹುಮ್ಮಸ್ಸು ಮಜಾ ಮಾತ್ರ ನೆನಪಿನಲ್ಲಿ ಉಳದ್ದು

Shrubhanu